ಉಡುಪಿಯ ಉದ್ಯಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕನ ಕೋಡ ಪಡುಕರೆ ಭಾಗದಲ್ಲಿ ಕಡಲು ಕೊರೆತ ತೀವ್ರಗೊಂಡಿದೆ. ಹೀಗಾಗಿ ಕಡಲೆಕಿನಾರೆಯಲ್ಲಿ ಸಾಗುವ ಹೆಜಮಾಡಿ ಕಾಪುವಿನಿಂದ ಮಲ್ಪೆವರೆಗಿನ ಏಕೈಕ ಸಂಪರ್ಕ ರಸ್ತೆ ಕಡಿದು ಹೋಗುವ ಭೀತಿಯಲ್ಲಿದೆ. ಕಡಲ್ಕೊರೆತ ಭಾದಿಸದಂತೆ ಇರಿಸಲಾದ ಬೃಹತ್ ಗಾತ್ರದ ಬಂಡೆ ಕಲ್ಲುಗಳು ಅಲೆಗಳ ಅರ್ಭಟಕ್ಕೆ ತಡೆಯಲು ವಿಫಲವಾಗ್ತ ಇದೆ.ಕಳೆದ 2 ದಿನಗಳಿಂದ ಈ ಭಾಗದಲ್ಲಿ ಕಡಲ್ಕೊರೆತ ತೀವ್ರಗೊಂಡಿದ್ದು, ಕಡಲ್ಕೊರೆತ ತಡೆಯಲು ಹಾಕಲಾದ ಬಂಡೆಕಲ್ಲು ಸಮುದ್ರ ಪಾಲಾಗುತ್ತಿದೆ. ಸಮುದ್ರದ ತೆರೆಗಳು ಕಡಲ