ಮಂಗಳೂರು: ದ.ಕ. ಜಿಲ್ಲೆಯಲ್ಲಿ ಮೂವರು ನಕ್ಸಲರು ಓಡಾಟ ನಡೆಸಿದ್ದಾರೆಂದು ಸ್ಥಳೀಯರು ನೀಡಿದ ಮಾಹಿತಿಯನ್ವಯ ಕಾರ್ಯಾಚರಣೆ ನಡೆಸುತ್ತಿರುವ ನಕ್ಸಲ್ ನಿಗ್ರಹ ಪಡೆ ಇಂದೂ ಕೂಡಾ ಕೂಂಬಿಂಗ್ ಮುಂದುವರಿಸಿದೆ. ದ.ಕ. ಜಿಲ್ಲೆಯ ಶಿರಾಡಿ, ಅಡ್ಡ ಹೊಳೆ, ಬೆಳ್ತಂಗಡಿ, ಸುಳ್ಯ ಮುಂತಾದ ಕಾನನ ಪ್ರದೇಶದಲ್ಲಿ ನಕ್ಸಲ್ ನಿಗ್ರಹ ಪಡೆ 8 ತಂಡಗಳಾಗಿ ಕಾರ್ಯಾಚರಣೆ ನಡೆಸುತ್ತಿದೆ. ಈ ನಕ್ಸಲ್ ತಂಡಕ್ಕೆ ಲತಾ ಎಂಬಾಕೆ ಕಮಾಂಡರ್ ಆಗಿದ್ದು, ಇನ್ನಿಬ್ಬರು ಪುರುಷರಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.ಈ ಮೂವರು