ಸಂಸ್ಥಾಪಕ ವಿ.ಜಿ. ಸಿದ್ಧಾರ್ಥ್ ಸಾವಿನ ಬಳಿಕ ಈಗಷ್ಟೇ ಸಾಲದ ಸುಳಿಯಿಂದ ಹೊರಬರುತ್ತಿರುವ ಕಾಫಿ ಡೇ ಎಂಟರ್ಪ್ರೈಸಸ್ ಲಿಮಿಟೆಡ್ಗೆ ಸೆಬಿ ಭಾರೀ ಮೊತ್ತದ ದಂಡ ವಿಧಿಸಿದೆ. ಹಣವನ್ನು ಬೇರೆಡೆಗೆ ವರ್ಗಾಯಿಸಿದ ಆರೋಪದ ಮೇಲೆ ಈ ದಂಡ ವಿಧಿಸಲಾಗಿದೆ. ಷೇರು ಮಾರುಕಟ್ಟೆ ನಿಯಂತ್ರಕ ಸಂಸ್ಥೆಯಾಗಿರುವ ಸೆಕ್ಯೂರಿಟೀಸ್ ಆಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಕಾಫಿ ಡೇ ಎಂಟರ್ಪ್ರೈಸಸ್ಗೆ 26 ಕೋಟಿ ರೂ. (3.2 ಮಿಲಿಯನ್ ಡಾಲರ್) ದಂಡವನ್ನು ವಿಧಿಸಿದೆ ಎಂದು ಸಂಸ್ಥೆಯ