ಬೆಂಗಳೂರು: ಅಪಾಯಕಾರಿ ಸ್ಥಳಗಳಲ್ಲಿ ನಿಂತು ಸೆಲ್ಫಿ ಕ್ಲಿಕ್ಕಿಸುವುದೆಂದರೆ ಈಗಿನ ಯುವ ಜನಾಂಗಕ್ಕೆ ಸಖತ್ ಕ್ರೇಜ್. ಆದರೆ ಇನ್ನು ಮುಂದೆ ಈ ರೀತಿ ಸಾಹಸಗಳನ್ನು ಮಾಡಿದರೆ, ಅದರಿಂದಾಗುವ ಸಾವು-ನೋವು ಪ್ರಕರಣಗಳಿಗೆ ವಿಮಾ ಕಂಪನಿಗಳು ಪರಿಹಾರ ನೀಡದಿರಲು ಚಿಂತನೆ ನಡೆಸಿವೆಯಂತೆ. ರೈಲ್ವೆ ಹಳಿ, ಜಲಪಾತ, ಬೆಟ್ಟದ ತುದಿ, ಕಟ್ಟಡದ ತುದಿ ಹೀಗೆ ಅಪಾಯಕಾರಿ ಸ್ಥಳಗಳಲ್ಲಿ ಸೆಲ್ಫಿ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣಗಳಿಗೆ ಹರಿಬಿಟ್ಟು ಲೈಕ್ಸ್, ಕಮೆಂಟ್ಸ್ ಗಿಟ್ಟಿಸಿಕೊಳ್ಳುವ ಉಮೇದು ಈಗಿನವರಿಗೆ ಹೆಚ್ಚು. ಇದರಿಂದ ಸಾಕಷ್ಟು