ನೆರೆಗೆ ಹಾಳಾದ ಜಮೀನಲ್ಲೇ ಸೀಗೆ ಹುಣ್ಣಿಮೆ ಆಚರಣೆ: ಹಬ್ಬದ ದಿನ ಕಣ್ಣೀರು ಹಾಕಿದ ಅನ್ನದಾತ

ಧಾರವಾಡ, ಶುಕ್ರವಾರ, 11 ಅಕ್ಟೋಬರ್ 2019 (17:08 IST)

ಪ್ರವಾಹದಿಂದ ಬೆಳೆ, ಬದುಕು ಕಳೆದುಕೊಂಡ ರೈತಾಪಿ ವರ್ಗ ಅಳಿದುಳಿದ ಜಮೀನಿನ ಬೆಳೆಯಲ್ಲೇ ಸೀಗೆ ಹುಣ್ಣಿಮೆ ಆಚರಿಸಿದ್ದು, ಜಮೀನಿನ ಪರಿಸ್ಥಿತಿ ಕಂಡು ಹಬ್ಬದಲ್ಲೂ ಕಣ್ಣೀರು ಹಾಕಿದ್ದಾರೆ.
 

ಧಾರವಾಡ ಜಿಲ್ಲೆಯ ಕೆಲಭಾಗಗಳಲ್ಲಿ ರೈತ ಸಮೂಹ ಸೀಗೆ ಹುಣ್ಣಿಮೆಯನ್ನು ಶ್ರದ್ಧಾ-ಭಕ್ತಿಗಳೊಂದಿಗೆ ಸಂಭ್ರಮದಿಂದ ಆಚರಿಸಿತು. ಈ ಬಾರಿ ಮಳೆಯಿಂದಾಗಿ ರೈತ ಸಮೂಹ ತೀವ್ರ ಸಂಕಷ್ಟದಲ್ಲಿದೆ. ಆದರೂ ಕೂಡ ಸಂಪ್ರದಾಯವನ್ನು ಕೈಬಿಡಬಾರದೆಂಬ ಉದ್ದೇಶದಿಂದ ರೈತರು ಭೂದೇವಿಯ ಆರಾಧನೆಯಲ್ಲಿ ನಿರತವಾಗಿ ವಿಶೇಷವಾಗಿ ಗಮನ ಸೆಳೆದರು.

 ವಿಜಯದಶಮಿಯ ಬಳಿಕ ಬರುವ ಸೀಗೆ ಹುಣ್ಣಿಮೆಗೆ ಗ್ರಾಮೀಣ ಭಾಗದಲ್ಲಿ ವಿಶೇಷ ಮಹತ್ವ ನೀಡಲಾಗುತ್ತದೆ. ಬೆಳಗ್ಗೆ ಮನೆಯಲ್ಲಿ 5 ಬಗೆಯ ಕಾಳುಗಳನ್ನು ಕುದಿಸಿ ಅವುಗಳನ್ನು ಹೊಲದ ಸುತ್ತಲೂ ಚರಗ ರೂಪದಲ್ಲಿ ಚೆಲ್ಲುವ ಸಂಪ್ರದಾಯವಿದೆ.

ಹೀಗೆ ಚರಗ ಚೆಲ್ಲುವುದರಿಂದ ಫಸಲು ಸಮದ್ಧವಾಗಿರಲಿದೆ ಎನ್ನುವ ನಂಬಿಕೆ ಜನಪದದಲ್ಲಿದೆ.  ಜಾನುವಾರುಗಳ ಮೈತೊಳೆದು ಸಿಂಗರಿಸುವುದು ಸಂಪ್ರದಾಯವಾಗಿದೆ. ಹೊಲಗಳಲ್ಲಿ ಪೂಜೆ ಮಾಡಿ ಚರಗಾ ಚಲ್ಲಿದರೇ ಕೆಲವು ಕುಟುಂಬಗಳು ಚಕ್ಕಡಿ ಕಟ್ಟಿಕೊಂಡು ಕುಟುಂಬ ಸದಸ್ಯರ ಜೊತೆಗೆ ತಮ್ಮ ಕೃಷಿ ಭೂಮಿಗೆ ತೆರಳಿದ್ರು. ಬೆಳೆದು ನಿಂತಿರುವ ಫಸಲಿಗೆ ಪೂಜೆ ಸಲ್ಲಿಸಿ, ಧನ್ಯತಾ ಭಾವದಲ್ಲಿ ತೇಲಿದರು.

ಪ್ರವಾಹದಿಂದ ನೀರುಪಾಲಾದ ಬೆಳೆಯನ್ನು ಕಂಡು ಕೆಲವು ರೈತರು ಹಬ್ಬದ ಸಂಭ್ರಮದಲ್ಲೂ ಕಣ್ಣೀರು ಹಾಕಿದ್ದಾರೆ.

 
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಕಿಸ್ ಮಾಡ್ತೀನಿ ಅಂತ ಪತ್ನಿಯ ನಾಲಿಗೆ ಕಟ್ ಮಾಡಿದ ಗಂಡ

ಗಂಡ – ಹೆಂಡತಿ ಜಗಳ ಉಂಡು ಮಲಗೋ ತನಕ ಅನ್ನೋದು ಹಳೇ ಗಾದೆ. ಈಗೀಗ ಕೆಲವು ದಂಪತಿಯ ಜಗಳ ಪೊಲೀಸ್ ಠಾಣೆ ...

news

ಈ ಬೀಜಕ್ಕಾಗಿ ಕುಟುಂಬದೊಂದಿಗೆ ಠಿಕಾಣಿ ಹೂಡಿರೋ ರೈತರು

ಕುಟುಂಬ ಸಹಿತವಾಗಿ ರೈತರು ಠಿಕಾಣಿ ಹೂಡಿರೋ ಘಟನೆ ನಡೆದಿದೆ.

news

ಹುಚ್ಚ ವೆಂಕಟ್ ಬಗ್ಗೆ ಕಿಚ್ಚ ಸುದೀಪ್ ಹೇಳಿದ್ದೇನು?

ಬಿಗ್ ಬಾಸ್ ಹೊಸ ಸರಣಿಯ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಈ ವೇಳೆ ಹಳೇ ಸ್ಪರ್ಧಿ ಹುಚ್ಚ ವೆಂಕಟ್ ಬಗ್ಗೆ ...

news

ಶಾಕ್ ಮೇಲೆ ಶಾಕ್ ಕೊಡ್ತಿರೋ ಐಸಿಐಸಿಐ ಬ್ಯಾಂಕ್

ಐಸಿಐಸಿಐ ಬ್ಯಾಂಕ್ ತನ್ನ ಗ್ರಾಹಕರಿಗೆ ಹಾಗೂ ರೈತರಿಗೆ ಶಾಕ್ ಮೇಲೆ ಶಾಕ್ ಕೊಡುತ್ತಿದೆ.