ಬೆಂಗಳೂರು : ವಾರದಲ್ಲಿ 2 ದಿನ ಮದ್ಯ ಮಾರಾಟ ಮಾಡಿ ಮದ್ಯ ವ್ಯಸನಿಗಳ ಸಾವನ್ನು ತಪ್ಪಿಸಿ ಎಂದು ಮಾಜಿ ಸಚಿವ ಎಚ್.ವಿಶ್ವನಾಥ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾರದಲ್ಲಿ 2 ದಿನ ಮದ್ಯ ಮಾರಾಟ ಅವಕಾಶ ನೀಡಿ. ವೈನ್ ಶಾಪ್, ಎಂಎಸ್ ಐಎಲ್ ಮಳಿಗೆಗಳಲ್ಲಿ ನಿಗದಿತ ಅವಧಿಯಲ್ಲಿ ಮದ್ಯ ಮಾರಾಟವಾಗಬೇಕು. ಇದರಿಂದ ವ್ಯಸನಿಗಳು ಸಾಯುವುದನ್ನು ತಪ್ಪಿಸಬಹುದು ಮಾತ್ರವಲ್ಲ ಕಾಳ ಸಂತೆಯಲ್ಲಿ ಮದ್ಯ