ರಾಜ್ಯದ ಹಿರಿಯ ಸಾಹಿತಿ ಬೇಲೂರು ಕೃಷ್ಣಮೂರ್ತಿ ನಿಧನರಾಗಿದ್ದಾರೆ. ಬೇಲೂರಿನ ಹೆಸರಾಂತ ಸಾಹಿತಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬೇಲೂರು ಕೃಷ್ಣಮೂರ್ತಿ ( 90) ಅನಾರೋಗ್ಯದಿಂದ ನಿಧನರಾದರು.ಮೃತರ ಸ್ವ ಇಚ್ಛೆಯಂತೆ ಅವರ ಮೃತದೇಹವನ್ನು ಹಾಸನದ ಶ್ರೀಧರ್ಮಸ್ಥಳ ಆಯುರ್ವೇದಿಕ್ ಆಸ್ಪತ್ರೆಗೆ ದೇಹ ದಾನ ನೀಡಲಾಗುತ್ತದೆ.ಇದಕ್ಕೂ ಮೃತರ ಸ್ವಗೃಹದ ಬಳಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಹಿರಿಯ ಸಾಹಿತಿ ಅಗಲಿಕೆಯಿಂದ ಸಾಹಿತ್ಯ ಲೋಕಬಡವಾಗಿದ್ದು, ಸಾಹಿತಿಗಳು, ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.