ಗಣೇಶ ಹಬ್ಬಕ್ಕೆ ಅನುಮತಿ ಬಗ್ಗೆ ಇನ್ನು ತೀರ್ಮಾನ ಮಾಡಿಲ್ಲ. ಸೆಪ್ಟೆಂಬರ್ 5 ರಂದು ಸಭೆ ಮಾಡಿ ನಿಶ್ಚಯ ಮಾಡುತ್ತೇವೆ ಅಂತಾ ಸಚಿವ ಡಾ.ಸಿ.ಎನ್.ನಾರಾಯಣ್ ತಿಳಿಸಿದ್ರು. ರಾಮನಗರ ಜಿಲ್ಲೆ ಮಾಗಡಿ ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿ ಕೆ.ಆರ್.ಐ.ಡಿ.ಎಲ್ ವತಿಯಿಂದ ನಿರ್ಮಾಣ ಮಾಡಿದ್ದ ಆಕ್ಸಿಜನ್ ಘಟಕ ಉದ್ಘಾಟಿಸಿ ಮಾತನಾಡಿದ್ರು. ಕೋವಿಡ್ ಸೋಂಕಿನ ಸಂಖ್ಯೆ ಯಾವ ಮಟ್ಟದಲ್ಲಿ ಇರಲಿದೆ ಎಂಬುದನ್ನು ನೋಡಬೇಕಿದೆ, ಎಲ್ಲರಿಗೂ ಗಣೇಶ ಹಬ್ಬ ಆಚರಣೆ ಮಾಡಬೇಕೆಂದು ಬಹಳಷ್ಟು ಆಸಕ್ತಿ ಇರುತ್ತದೆ, ಕಳೆದ ವರ್ಷವೂ