ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಬೇಡಿಕೆ ಕುರಿತಂತೆ ಬೆಳಗಾವಿಯಲ್ಲಿ ಹಮ್ಮಿಕೊಂಡಿರುವ ಸ್ವಾಮೀಜಿಗಳ ನೇತೃತ್ವದ ಪ್ರತಿಭಟನೆಯಲ್ಲಿ ಬಿ.ಎಸ್.ಯಡಿಯೂರಪ್ಪ ಪ್ರತ್ಯೇಕ ರಾಜ್ಯ ಬೇಡವೆಂದರು ಮಾಡಿದರೆ, ಮಾಜಿ ಸಚಿವ ಉಮೇಶ ಕತ್ತಿ ಪ್ರತ್ಯೇಕತೆಯ ಕೂಗನ್ನ ಮತ್ತಷ್ಟು ಗಟ್ಟಿಗೊಳಿಸಿದ ಘಟನೆ ನಡೆದಿದೆ.ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರು ಮಠಾಧೀಶರದಲ್ಲಿ ಪ್ರತ್ಯೇಕ ರಾಜ್ಯದ ಬೇಡಿಕೆ ಬೇಡವೆಂದು ಮನವಿ ಮಾಡಿದರು. ಆಗಷ್ಟ 2ರಂದು ಕರೆ ಕೊಟ್ಟಿರುವ ಉತ್ತರ ಕರ್ನಾಟಕ 13 ಜಿಲ್ಲೆಗಳ ಬಂದ್ ಹಿಂಪಡೆಯುವಂತೆ ವಿನಂತಿಸಿಕೊಂಡರು. ನಾನೇ ಉತ್ತರ ಕರ್ನಾಟಕದ ಜನರ