ಬೆಂಗಳೂರು: ಧಾರವಾಹಿಗಳು ಜನರ ಮನಸ್ಸಿಗೆ ಎಷ್ಟು ಬೇಗ ತಲುಪುತ್ತದೆ ಮತ್ತು ಎಷ್ಟು ಪರಿಣಾಮಕಾರಿಯಾಗುತ್ತದೆ ಎನ್ನುವುದಕ್ಕೆ ಈ ಘಟನೆ ಒಂದು ಉದಾಹರಣೆ.ಅದೇ ರೀತಿ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ ನಂದಿನಿ ಧಾರವಾಹಿ ನೋಡುತ್ತಿದ್ದ ಪರಿವಾರದ ಮಗುವೊಂದು ಧಾರವಾಹಿಯ ಪ್ರಭಾವದಿಂದ ಮೈಗೆ ಬೆಂಕಿ ಹಚ್ಚಿಕೊಂಡು ಸಾವಿಗೀಡಾದ ಶಂಕೆ ವ್ಯಕ್ತವಾಗಿದೆ.ಧಾರವಾಹಿಯಲ್ಲಿ ಬರುವ ದೃಶ್ಯವನ್ನು ನೋಡಿ ಪ್ರೇರಣೆಗೊಂಡ 7 ವರ್ಷದ ಬಾಲಕಿ ಈ ಘೋರ ಕೃತ್ಯಕ್ಕೆ ಮುಂದಾಗಿರಬೇಕೆಂದು ಶಂಕಿಸಲಾಗಿದೆ. ನ.12 ರಂದೇ ಬಾಲಕಿ ಬೆಂಕಿ ಅನಾಹುತದಿಂದ ಸಾವಿಗೀಡಾಗಿದ್ದಳು.