ಭಾರತ್ ಬಂದ್ ವೇಳೆಯನ್ನೇ ಅವಕಾಶವನ್ನಾಗಿ ಬಳಸಿಕೊಂಡ ಕಳ್ಳರು ಹಾಡುಹಗಲೇ ತಮ್ಮ ಕೈಚಳಕ ತೋರಿದ್ದಾರೆ. ಹಾಡು ಹಗಲೇ ಸುಮಾರು 16 ಅಂಗಡಿಗಳ ಬೀಗ ಮುರಿದು ಅಪಾರ ಹಣವನ್ನು ಕಳ್ಳರು ಕೊಳ್ಳೆ ಹೊಡೆದ ಘಟನೆ ನಡೆದಿದೆ. ಹುಬ್ಬಳ್ಳಿಯ ಎ.ಪಿ.ಎಂ.ಸಿಯಲ್ಲಿ ನಡೆದ ಘಟನೆ ಇದಾಗಿದೆ. ನಗರದ ಅಮರಗೋಳದಲ್ಲಿರುವ ಎ.ಪಿ.ಎಂ.ಸಿ ಮಾರುಕಟ್ಟೆಯಲ್ಲಿನ ಅಂಗಡಿಗಳ ಬೀಗಗಳನ್ನು ಮುರಿದ ಕಳ್ಳರು ಸುಮಾರು 7 ಲಕ್ಷ ರೂ. ಹಣವನ್ನು ಕದ್ದು ಪರಾರಿಯಾಗಿದ್ದಾರೆ.ವಿವಿಧ ಕಾರ್ಮಿಕ ಸಂಘಟನೆಗಳು ದೇಶಾದ್ಯಂತ ಬಂದ್ ಘೋಷಿಸಿದ್ದರ ಹಿನ್ನೆಲೆಯಲ್ಲಿ