ವಿದ್ಯಾರ್ಥಿಯೊಬ್ಬನ ಮೇಲೆ ಯುವಕನೊಬ್ಬ ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಕರಣ ವರದಿಯಾಗಿದೆ. 12 ವರ್ಷದ ವಿದ್ಯಾರ್ಥಿಯ ಮೇಲೆ 32 ವರ್ಷದ ವ್ಯಕ್ತಿ ಲೈಂಗಿಕ ದೌರ್ಜನ್ಯ ನಡೆಸಿ ಪರಾರಿಯಾಗಿದ್ದಾನೆ. ಈ ಘಟನೆ ಕಲಬುರಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಮಳಖೇಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಮಳಖೇಡ ಹತ್ತಿರದ ಸ್ಟೇಷನ್ ತಾಂಡಾ ನಿವಾಸಿ ಪಾಶುಮಿಯಾ ತಂದೆ ಹುಸೇನ್ ಎಂಬಾತನೇ ಆರೋಪಿಯಾಗಿದ್ದಾನೆ. ಐಸ್ ಕ್ರೀಮ್ ಕೊಡಿಸುವುದಾಗಿ ರಮಿಸಿ ಮನೆಗೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯವೆಸಗಿದ್ದಾನೆ. ವಿಷಯ ನಂತರ ಪಾಲಕರ