Widgets Magazine

ಪಬ್ ನಲ್ಲಿ ಯುವತಿಗೆ ಅಪರಿಚಿತ ವ್ಯಕ್ತಿಯಿಂದ ಲೈಂಗಿಕ ಕಿರುಕುಳ

ಬೆಂಗಳೂರು| pavithra| Last Modified ಗುರುವಾರ, 22 ನವೆಂಬರ್ 2018 (07:19 IST)
ಬೆಂಗಳೂರು : ಬೆಂಗಳೂರು ನಗರದ
ಕೋರಮಂಗಲದಲ್ಲಿರುವ ಬ್ರೈಲಿ
ಪಬ್ ನಲ್ಲಿ ಅಪರಿಚಿತ ವ್ಯಕ್ತಿಯೊಬ್ಬ
ಯುವತಿಯೊಬ್ಬಳಿಗೆ ನೀಡಿದ ಘಟನೆ ಒಂದು ವಾರದ ಹಿಂದೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.



ಯುವತಿ ತನ್ನ ಸ್ನೇಹಿತರ ಜೊತೆ ರಾತ್ರಿ ಪಬ್​ಗೆ ತೆರಳಿದ್ದಳು. ಆಗ ವಾಶ್ ರೂಂ ಗೆ ತೆರಳಿದ ಆಕೆಯ ಜೊತೆ ಅಪರಿಚಿತ ವ್ಯಕ್ತಿವೋರ್ವ ಅನುಚಿತವಾಗಿ ವರ್ತಿಸಿದ್ದಾನೆ. ಈ ವೇಳೆ ಕೂಗಿಕೊಂಡರೂ ಆಕೆಯನ್ನು ಬಿಟ್ಟಿರಲಿಲ್ಲ. ಕೊನೆಗೆ ಸ್ನೇಹಿತರು ಬಂದಾಗ ಆರೋಪಿ ಅಲ್ಲಿಂದ ಪರಾರಿಯಾಗಿದ್ದಾನೆ.


ಈ ಘಟನೆಗೆ
ಸಂಬಂಧಿಸಿದಂತೆ
ನೊಂದ ಯುವತಿ ಠಾಣೆಯಲ್ಲಿ ದೂರು ನೀಡಿದ್ದಾಳೆ. ಪಬ್​ನಲ್ಲಿದ್ದ ಸಿಸಿಟಿವಿ ಆಧರಿಸಿ ಆರೋಪಿ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್
ಡೌನ್‍ ಲೋಡ್ ಮಾಡಿಕೊಳ್ಳಿ.



ಇದರಲ್ಲಿ ಇನ್ನಷ್ಟು ಓದಿ :