ಬೆಂಗಳೂರು: ಬೆಂಗಳೂರು ಮೂಲದ ಯುವತಿಯೋರ್ವಳು ತಾನು 17 ವರ್ಷದವಳಿದ್ದಾಗ ತನ್ನನ್ನು ಮದುವೆಯಾಗುವುದಾಗಿ ನಂಬಿಸಿ ವರುಣ್ ಕುಮಾರ್ ತನ್ನ ಮೇಲೆ ಅತ್ಯಾಚಾರವೆಸಗಿದ್ದಾಗಿ ದೂರು ನೀಡಿದ್ದಾಳೆ.ಭಾರತ ಹಾಕಿ ತಂಡದ ಕ್ರೀಡಾಪಟು ವರುಣ್ ಕುಮಾರ್ ವಿರುದ್ದ ಪೋಕ್ಸೋ ಪ್ರಕರಣ ದಾಖಲಾಗಿದೆ.ಪ್ರಸ್ತುತ ಯುವತಿಗೆ 22 ವರ್ಷ ವಯಸಾಗಿದ್ದು 2019 ರಲ್ಲಿ ತಾವಿಬ್ಬರೂ ಇನ್ಸ್ಟಾಗ್ರಾಂ ಮೂಲಕ ಪರಿಚಯವಾಗಿದ್ದಾಗಿ ಹೇಳಿಕೊಂಡಿದ್ದಾಳೆ. ಬೆಂಗಳೂರಿನ ಸಾಯ್ ಸ್ಟೇಡಿಯಂನಲ್ಲಿ ಹಾಕಿ ಪಂದ್ಯಾವಳಿಗಳು ನಡೆಯುವಾಗ ಇಲ್ಲಿಗೆ ಬರುತ್ತಿದ್ದ ವರುಣ್ ತನ್ನ ಮೇಲೆ ನಿರಂತರವಾಗಿ ಅತ್ಯಾಚಾರ