Widgets Magazine

ಇಂದಿರಾ ಕ್ಯಾಂಟಿನ್‌ ಮೇಲಾಧಿಕಾರಿಯಿಂದ ಮಹಿಳೆಗೆ ಲೈಂಗಿಕ ಕಿರುಕುಳ

ಬೆಂಗಳೂರು| Hanumanthu.P| Last Modified ಶನಿವಾರ, 6 ಜನವರಿ 2018 (15:43 IST)
ಇಂದಿರಾ ಕ್ಯಾಂಟೀನ್ ಮಹಿಳಾ ಕ್ಯಾಷಿಯರ್‌ಗೆ ಕ್ಯಾಂಟಿನ್ ಮೇಲಾಧಿಕಾರಿ ನೀಡಿರುವ ಆರೋಪ ಕೇಳಿಬಂದಿದೆ.

ಇಂದಿರಾ ಕ್ಯಾಂಟಿನ್ ಮೇಲಾಧಿಕಾರಿ ಸತೀಶ್
ವಿರುದ್ಧ ಬಂಡಿಪಾಳ್ಯದಲ್ಲಿರುವ ಇಂದಿರಾ ಕ್ಯಾಂಟೀನ್‌ನ ಮಹಿಳಾ ಕ್ಯಾಷಿಯರ್‌ ಲೈಂಗಿಕ ಕಿರುಕುಳ ಅರೋಪ ಮಾಡಿದ್ದಾರೆ.

ಬಂಡೆಪಾಳ್ಯ ಪೊಲೀಸ್ ಠಾಣೆಗೆ ದೂರು ನೀಡಿರುವ ಮಹಿಳೆ, ಕೆಲಸದಲ್ಲಿ ಮುಂದುವರೆಯಬೇಕಾದರೆ ತನ್ನೊಂದಿಗೆ ಆಕ್ರಮ ಸಂಬಂಧ ಮುಂದುವರಿಸಿಬೇಕೆಂದು ಸತೀಶ್‌ ಒತ್ತಾಯಿಸಿದ್ದಾರೆ. ಅಲ್ಲದೆ, ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಸತೀಶ್ ರಾತ್ರಿ ವೇಳೆ ಫೋನ್ ಮಾಡಿ ಅವ್ಯಾಚ್ಯ ಪದಗಳಿಂದ ತನ್ನನ್ನು ನಿಂದಿಸಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :