ನಡುರಸ್ತೆಯಲ್ಲಿಯೇ ಕಾಮುಕನೊಬ್ಬ ಯುವತಿಯ ಸೊಂಟ ಮುಟ್ಟಿ ಕಿರುಕುಳ ನೀಡಿ ಅಸಭ್ಯ ವರ್ತನೆ ತೋರಿದ ಘಟನೆ ವರದಿಯಾಗಿದೆ. ಯುವತಿ ಜಾಲಹಳ್ಳಿ ಕ್ರಾಸ್ ಬಳಿ ರಸ್ತೆಯನ್ನು ದಾಟುತ್ತಿದ್ದಾಗ ನಾರಾಯಣ್ ಸ್ವಾಮಿ ಎನ್ನುವ ಆರೋಪಿ ಆಕೆಯ ಸೊಂಟ ಮುಟ್ಟಿ ಕಿವಿಚಿದ್ದಲ್ಲದೇ ಕೆಲ ಅಶ್ಲೀಲ ಪದಗಳನ್ನು ಬಳಸಿ ಕೀಳು ವರ್ತನೆ ತೋರಿದ್ದಾನೆ ಎನ್ನಲಾಗಿದೆ. ಆರೋಪಿಯ ದುರ್ನಡತೆಯಿಂದ ಕೋಪಗೊಂಡ ಯುವತಿ ಆತನ ಕೆನ್ನೆಗೆ ಬಾರಿಸಿದ್ದಾಳೆ. ನಂತರ ಪೊಲೀಸ್ ಠಾಣೆಗೆ ತೆರಳಿ ಆರೋಪಿಯ ವಿರುದ್ಧ ದೂರು