ರಾಜ್ಯ ಘಟಕದೊಳಗಿನ ಪಕ್ಷಪಾತ, ದ್ವೇಷದ ವಿರುದ್ಧ ತೀವ್ರವಾದ ಎಚ್ಚರಿಕೆಯನ್ನು ನೀಡಿ ಭ್ರಷ್ಟಾಚಾರ ಮತ್ತು ಜಾತಿ ಧ್ರುವೀಕರಣದ ವಿಚಾರಗಳ ಬಗ್ಗೆ ಬಿಜೆಪಿ ಮುಖಂಡರ ಕಾರ್ಯವೈಖರಿಯ ಬಗ್ಗೆ ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಚುನಾವಣೆಗೆ ರಾಜ್ಯ ಘಟಕವನ್ನು ಹುರಿದುಂಬಿಸಲು ಮೂರು ದಿನಗಳ ಭೇಟಿಗಾಗಿ ಬೆಂಗಳೂರಿನಲ್ಲಿ ಆಗಮಿಸಿದ ಶಾ, ಕಾದಾಡುತ್ತಿದ್ದ ಬಣಗಳ ಮೇಲೆ ಚಾವಟಿ ಹಾಕಿ, ಪಕ್ಷಕ್ಕೆ ನಿಷ್ಠರಾಗಿರುವಂತೆ ಕಟ್ಟು ನಿಟ್ಟಿನ ಆದೇಶ ನೀಡಿದ್ದಾರೆ. ಪಕ್ಷವು ಯಾವುದೇ ರೀತಿಯ ಅಶಿಸ್ತಿನನ್ನೂ