ಮಾಜಿ ಸಚಿವ ಹಾಗೂ ಹಾಲಿ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಕಾಂಗ್ರೆಸ್ ನ ರಿಜೆಕ್ಟೆಡ್ ಗೂಡ್ಸ್ ಹೀಗಂತ ಬಿಜೆಪಿ ಮುಖಂಡ ಟೀಕೆ ಮಾಡಿದ್ದಾರೆ.ಶಾಮನೂರು ಶಿವಶಂಕರಪ್ಪ ಕಾಂಗ್ರೆಸ್ ನಲ್ಲಿ ರಿಜೆಕ್ಟೆಡ್ ಗೂಡ್ಸ್ ನಂತಿದ್ದಾರೆ. ಅಂತವರು ಬಿಜೆಪಿಗೆ ಅವಶ್ಯ ಇಲ್ಲ ಎಂದು ದಾವಣಗೆರೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಯಶವಂತ್ ರಾವ್ ಜಾದವ್ ವಾಗ್ದಾಳಿ ನಡೆಸಿದ್ದಾರೆ.ಬಿಜೆಪಿಯ ಅವರಪ್ಪನಿಗೂ ನನ್ನನ್ನ ಸಂಪರ್ಕಿಸಲು ಆಗಲ್ಲ ಎಂಬ ಶಾಮನೂರು ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಜಾಧವ್, ಅವನ್ಯಾರು ಬಿಜೆಪಿ ಪಕ್ಷಕ್ಕೆ ಸೇರಿಸಿಕೊಳ್ತಾರೆ.