ದುಡ್ಡಿನ ತೆವಲಿಗಾಗಿ ಜೆಡಿಎಸ್ ಪಕ್ಷ ನಿಮ್ಮನ್ನು ಹೊರಹಾಕಿದೆ ಎಂದು ರೆಬೆಲ್ ಶಾಸಕ ಜಮೀರ್ ಅಹ್ಮದ್ ಖಾನ್ ವಿರುದ್ಧ ಜೆಡಿಎಸ್ ಮುಖಂಡ ಶರವಣ ವಾಗ್ದಾಳಿ ನಡೆಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜಿನೆಸ್ ಮಾಡಿಕೊಂಡಿದ್ದ ನೀವು ವ್ಯವಹಾರಗೋಸ್ಕರ ಏನೇನು ಮಾಡಿದ್ದೀರಿ ಎನ್ನುವುದು ನಮಗೆ ಗೊತ್ತಿದೆ. ಕೇವಲ ಹಣಕ್ಕಾಗಿ ನಿಮ್ಮ ಮತಗಳನ್ನು ಮಾರಿಕೊಂಡಿದ್ದೀರಿ ಎಂದು ಗುಡುಗಿದ್ದಾರೆ. ನಿಮ್ಮ ವಿರುದ್ಧ ಎಚ್.ಡಿ. ರೇವಣ್ಣ ಸ್ಪರ್ಧಿಸುವುದು ಬಿಡಿ. ನಮ್ಮಂತಹ ಕಾರ್ಯಕರ್ತರು ಸಾಕು. ದೇವೇಗೌಡರು ನಿಮ್ಮಂತಹ ಅನೇಕರಿಗೆ