ಶಿವಮೊಗ್ಗ:ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ರೋಗಿಗೆ ಸ್ಟ್ರೆಚರ್ ನೀಡದೇ ನೆಲದ ಮೇಲೆ ಎಳೆದೊಯ್ದ ಘಟನೆಗೆ ಸಂಬಂಧಿಸಿದಂತೆ ಆಸ್ಪತ್ರೆಯ ಮೂವರು ಸಿಬ್ಬಂದಿಗಳನ್ನ ಅಮಾನತು ಮಾಡಿ ಆಸ್ಪತ್ರೆ ಡೀನ್ ಆದೇಶ ಹೊರಡಿಸಿದ್ದಾರೆ. ಮೆಗ್ಗಾನ್ ಆಸ್ಪತ್ರೆಯ ಸ್ಟಾಫ್ ನರ್ಸ್ ಗಳಾದ ಜ್ಯೋತಿ, ಚೈತ್ರ ಹಾಗೂ ಡಿ ಗ್ರೂಪ್ ನೌಕರೆಯಾದ ಸುವರ್ಣಮ್ಮ ಅಮಾನತಾದ ಸಿಬ್ಬಂದಿಗಳು. ಆಸ್ಪತ್ರೆಯ ಡೀನ್ ಸುಶೀಲ್ ಕುಮಾರ್ ಮೂವರು ಸಿಬ್ಬಂದಿಗಳನ್ನ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಶಿವಮೊಗ್ಗ ಆಸ್ಪತ್ರೆಯ ಅಮಾನವೀಯ ಘಟನೆ