ಮಂಗಳೂರು: ವಿಪರೀತ ಮಳೆಯಿಂದಾಗಿ ಗುಡ್ಡ ಕುಸಿದ ಪರಿಣಾಮ ಬೆಂಗಳೂರು ಮತ್ತು ಮಂಗಳೂರು ನಡುವಿನ ಸಂಪರ್ಕ ರಸ್ತೆ ಬಂದ್ ಆಗಿದೆ.ಶಿರಾಡಿ ಘಾಟ್ ನಲ್ಲಿ ಗುಡ್ಡ ಕುಸಿದ ಪರಿಣಾಮ ರಸ್ತೆ ಬಂದ್ ಮಾಡಲು ಡಿಸಿ ಶಶಿಕಾಂತ್ ಸೆಂಥಿಲ್ ಆದೇಶ ನೀಡಿದ್ದಾರೆ. ಇಲ್ಲಿ ನಿನ್ನೆ ರಾತ್ರಿ ಮಣ್ಣು ತೆರವುಗೊಳಿಸಲಾಗಿತ್ತು. ಈಗ ಮತ್ತೆ ಗುಡ್ಡ ಕುಸಿದ ಪರಿಣಾಮ ತೆರವು ಕಾರ್ಯಾಚರಣೆ ನಡೆಯುವವರೆಗೆ ರಸ್ತೆ ಬಂದ್ ಮಾಡಲು ಡಿಸಿ ಆದೇಶಿಸಿದ್ದಾರೆ. ಇದರಿಂದಾಗಿ ಮಡಿಕೇರಿ, ಸಂಪಾಜೆ, ಶಿರಾಡಿ ಘಾಟ್