ಭಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿರುವ ಕಾರಣ ಶಿರಾಡಿ ಘಾಟ್ ನಲ್ಲಿ ನಿರಂತರ ಭೂ ಕುಸಿತ ಉಂಟಾಗುತ್ತಿದೆ. ಮಣ್ಣು ಹಾಗೂ ಕಲ್ಲು ಬಂಡೆ ತೆರವಿಗೆ ಸಮಯ ಬೇಕಾಗಿರುವ ಕಾರಣ ಆ. 25ರವರೆಗೆ ಶಿರಾಡಿ ಘಾಟ್ ರಸ್ತೆ ಸಂಚಾರ ಬಂದ್ ಮಾಡಲು ತೀರ್ಮಾನಿಸಲಾಗಿದೆ.ಮಂಗಳೂರು ಹಾಗೂ ದಕ್ಷಿಣ ಕನ್ನಡ ಸೇರಿದಂತೆ ಸುತ್ತಲಿನ ಬೆಳ್ತಂಗಡಿ, ಸುಳ್ಯ ಹಾಗೂ ಇನ್ನಿತರ ಕಡೆಗಳಲ್ಲಿ ಧಾರಕಾರ ಮಳೆ ಸುರಿಯುತ್ತಿರುವುದು ಮುಂದುವರಿದಿದೆ. ಭಾರೀ ಮಳೆ ಕಾರಣದಿಂದ ಅಲ್ಲಲ್ಲಿ ಭೂ ಕುಸಿತ ಸಂಭವಿಸುತ್ತಿದೆ.