ಶೀರೂರು ಸ್ವಾಮೀಜಿ ಅನುಮಾನಾಸ್ಪದ ಸಾವು ಪ್ರಕರಣದ ವಿಚಾರಣೆ ತೀವ್ರಗೊಂಡಿದೆ. ಏತನ್ಮಧ್ಯೆ ಪೊಲೀಸ್ ಇಲಾಖೆಯ ತನಿಖೆಯು ತೀವ್ರಗೊಳ್ಳುತ್ತಿದ್ದಂತೆ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಶೀರೂರು ಮೂಲಮಠದಲ್ಲಿದ್ದ ಸಿಸಿಟಿವಿ ಡಿವಿಆರ್ ನಾಪತ್ತೆಯಾಗಿರುವ ವಿಷಯ ಬೆಳಕಿಗೆ ಬಂದಿದೆ. ಶೀರೂರು ಮೂಲಮಠದಲ್ಲಿದ್ದ ಸಿಸಿಟಿವಿ ಡಿವಿಆರ್ ನಾಪತ್ತೆಯಾಗಿದೆ. ನಾಪತ್ತೆಯಾದ ಡಿವಿಆರ್ ಗಾಗಿ ಶೋಧ ಮುಂದುವರೆದಿದೆ. ಸ್ವಾಮೀಜಿ ಆಸ್ಪತ್ರೆಗೆ ದಾಖಲಾದ ದಿನ ನಾಪತ್ತೆಯಾದ ಸಿಸಿಟಿವಿ ಡಿವಿಆರ್ ಈವರೆಗೂ ಪತ್ತೆಯಾಗಿಲ್ಲ.ಶೀರೂರು ಮೂಲಮಠದಿಂದ ವಸ್ತುಗಳನ್ನು ಎಗರಿಸಿದ್ದ ವ್ಯಕ್ತಿ ಈ ಕೃತ್ಯ ಮಾಡಿರಬಹುದೆಂದು