ಬೆಂಗಳೂರು : ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿನ ನಗೆ ಬೀರಿದ್ದು, ಇದೀಗ ಸಿಎಂ ಕುರ್ಚಿಗಾಗಿ ಭಾರೀ ಫೈಟ್ ನಡೆಯುತ್ತಿದೆ. ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಹೊಟ್ಟೆಯಲ್ಲಿ ಸಮಸ್ಯೆಯಿದೆ. ಗ್ಯಾಸ್ಟಿಕ್ ಪ್ರಾಬ್ಲಂ ಆಗಿದೆ. ವೈದ್ಯರು ಬರುತ್ತಾರೆ, ರೆಸ್ಟ್ ಮಾಡುವುದಾಗಿ ತಿಳಿಸಿದರು. ಈ ಮೂಲಕ ದೆಹಲಿ ಪ್ರವಾಸ ರದ್ದುಗೊಳಿಸುವುದಾಗಿ ಪರೋಕ್ಷವಾಗಿ ಡಿಕೆಶಿ ಹೇಳಿದರು.ನಾನು ಪೂಜೆ ಪುರಸ್ಕಾರ ಮಾಡಬೇಕಿದೆ. ನನ್ನ ಜೊತೆ ಯಾವ ಶಾಸಕರು ಇಲ್ಲ. ನನಗೆ ಯಾರ ಬೆಂಬಲವೂ ಬೇಡ.