ಸೋಮವಾರ ನಡೆದ ಫ್ಲೆಕ್ಸ್ ವಿವಾದದ ನಂತರ ಶಿವಮೊಗ್ಗದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಕಳೆ ಇಲ್ಲದಂತಾಗಿದೆ.ಪೊಲೀಸರು ಅಂಗಡಿ-ಮುಂಗಟ್ಟು ಬಂದ್ ಮಾಡಿಸಿದ ಪರಿಣಾಮ ನಗರದ ಹೃದಯ ಭಾಗ ನೆಹರೂ ವೃತ್ತ, ಗೋಪಿ ಸರ್ಕಲ್ ಬಿಕೊ ಅನ್ನುತ್ತಿದ್ದವು. ಜಿಲ್ಲಾಡಳಿತ 144ನೇ ಸೆಕ್ಷನ್ ಅನ್ವಯ ನಿಷೇಧಾಜ್ಞೆ ವಿಧಿಸಿತು. ಮಂಗಳವಾರ ಶಿವಮೊಗ್ಗ ನಗರ ಹಾಗೂ ಭದ್ರಾವತಿ ಪಟ್ಟಣ ವ್ಯಾಪ್ತಿಯ ಎಲ್ಲ ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಲಾಯಿತು.ನಿಷೇಧಾಜ್ಞೆಯಿಂದ ಸಂಜೆ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ಸ್ವಾತಂತ್ರ್ಯೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮ