ಬೆಂಗಳೂರು: ವೀರಪ್ಪ ಮೊಯಿಲಿ ಟ್ವಿಟರ್ ನಲ್ಲಿ ಹಾಕಿರುವ ಬಾಂಬ್ ಕಾಂಗ್ರೆಸ್ ನಲ್ಲಿ ಹೊಸ ಸಂಚಲನ ಮೂಡಿಸಿದೆ. ವೀರಪ್ಪ ಮೊಯಿಲಿ ಯಾವ ಉದ್ದೇಶಕ್ಕೆ ಬರೆದುಕೊಂಡರೋ ಗೊತ್ತಿಲ್ಲ. ಆದರೆ ಕಾಂಗ್ರೆಸ್ ವಿರುದ್ಧ ಬಿಜೆಪಿ ನಾಯಕರಿಗೆ ಟೀಕಾಸ್ತ್ರ ಸಿಕ್ಕಿದೆ. ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಈ ಬಗ್ಗೆ ಟ್ವೀಟ್ ಮಾಡಿದ್ದು ಮೊಯಿಲಿ ಹೇಳಿದ್ದು ಸರಿಯಾಗಿಯೇ ಇದೆ. ಕಾಂಗ್ರೆಸ್ ನಲ್ಲಿ ಹಣದ ಸಂಸ್ಕೃತಿ ಎಂಬುದಕ್ಕೆ ಮೊಯಿಲಿ ಟ್ವೀಟ್ ಉದಾಹರಣೆ. ಸಿಎಂ ಸಿದ್ದರಾಮಯ್ಯ ಅನೈತಿಕವಾಗಿ ವರ್ತಿಸುತ್ತಾರೆ.