ಟಿಪ್ಪು ಜಯಂತಿ ದಿನದಂದು ಓಡಾಡಲು ಬಾಂಡ್ ಬರೆದುಕೊಡಬೇಕಂತೆ. ಬಾಂಡ್ ಬರೆದುಕೊಡದಿದ್ದಲ್ಲಿ ವಾರೆಂಟ್ ಜಾರಿ ಮಾಡ್ತಾರಂತೆ ಎಂದು ಪೊಲೀಸರ ವಿರುದ್ಧ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದ್ದಾರೆ. ಮುಂದಿನ ಆರು ತಿಂಗಳಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಲಿದ್ದಾರೆ. ಆವಾಗ ನಮ್ಮ ಹುಡುಗರು ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ. ತಕ್ಕ ಪಾಠ ಕಲಿಸುತ್ತಾರೆ ಎಂದು ಪೊಲೀಸರಿಗೆ ಎಚ್ಚರಿಕೆ ನೀಡಿದ್ದಾರೆ. ಪೊಲೀಸರು ಇಲ್ಲಿಗೆ ಬಂದಿರುವುದು ನಮ್ಮನ್ನು ಕಾಯಲು ಅಲ್ಲ. ನಮ್ಮ ಯಾತ್ರೆಯ ವರದಿಯನ್ನು