ಬಿಜೆಪಿಯ ಬಿ.ಎಸ್.ಯಡಿಯೂರಪ್ಪ ಶೋಭಕ್ಕನನ್ನು ಮೊದಲು ಚೆನ್ನಾಗಿ ನೋಡಿಕೊಳ್ಳಲಿ.ಅವರಿಗೆ ಕೇಂದ್ರ ಸಚಿವೆ ಸ್ಥಾನ ನೀಡಿ ಅಭಿವೃದ್ಧಿ ಮಾಡಿಸಲೀ ಎಂದು ಸಚಿವ ಹೆಚ್.ಡಿ.ರೇವಣ್ಣ ಮೂದಲಿಸಿದ್ದಾರೆ.ಹಾಸನದಲ್ಲಿ ಸಚಿವ ಹೆಚ್.ಡಿ.ರೇವಣ್ಣ ಹೇಳಿಕೆ ನೀಡಿದ್ದು, ಬಿಜೆಪಿಯವರಿಗೆ ಮಾನ, ಮರ್ಯಾದೆ ಇದ್ರೆ ಬರದ ಬಗ್ಗೆ ತಲೆ ಕೆಡೆಸಿಕೊಳ್ಳಲಿ. ಶಾಸಕರನ್ನು ಹೋಟಲ್ ನಲ್ಲಿ ಕೂರಿಸಿಕೊಂಡು ಮಜಾ ಮಾಡುವುದಲ್ಲ. ಆಪರೇಷನ್ ಕಮಲ ಮಾಡಿಲ್ಲ ಎಂಬ ಯಡಿಯೂರಪ್ಪ ಹೇಳಿಕೆಗೆ ರೇವಣ್ಣ ಗರಂ ಆಗಿದ್ದು, ಚರ್ಚೆ ಮಾಡುವುದಕ್ಕೆ ಬಾಂಬೆಗ್ಯಾಕ್ರೀ ಹೋಗಬೇಕು? ಎಂದು ಪ್ರಶ್ನಿಸಿದ್ದಾರೆ. ಹೆಚ್.ಡಿ.