ಹುಬ್ಬಳ್ಳಿ : ಕೋವಿಡ್ ನಿರ್ವಹಣೆ ಜೊತೆಗೆ ಸರ್ಕಾರ ಕೆಲ ಎಡವಟ್ಟುಗಳನ್ನು ಮಾಡುತ್ತಲೇ ಬಂದಿದೆ. ವ್ಯಾಕ್ಸಿನ್ ಪಡೆಯಲೆಂದು ಬಂದಿದ್ದ ವ್ಯಕ್ತಿಗೆ ಲಸಿಕೆ ಪಡೆಯುವ ಮುನ್ನವೇ ಲಸಿಕೆ ಪ್ರಮಾಣ ಪತ್ರ ಬಂದಿರುವುದನ್ನು ಕಂಡು ಸಾರ್ವಜನಿಕರೊಬ್ಬರು ಆಶ್ಚರ್ಯಗೊಂಡಿದ್ದಾರೆ. ಲಸಿಕೆ ಪಡೆಯದಿದ್ದರೂ ಸರ್ಟಿಫಿಕೇಟ್ ದೊರೆಯುತ್ತದೆ. ಕೆಲವರಿಗೆ ಕೋವಿಡ್ ಲಸಿಕೆ ಪಡೆದರೂ ಪ್ರಮಾಣಪತ್ರ ಬಾರದಿರುವ ಪ್ರಕರಣಗಳಿವೆ. ಆದರೆ ಇಲ್ಲಿ ವ್ಯಕ್ತಿಯೊಬ್ಬರು ಇನ್ನೂ ಲಸಿಕೆಯನ್ನೇ ಹಾಕಿಸಿಕೊಂಡಿಲ್ಲ. ಆಗಲೇ ಅವರ ಹೆಸರಿನಲ್ಲಿ ಕೋವಿಡ್ ಲಸಿಕೆ ಹಾಕಿಸಿಕೊಂಡ ಪ್ರಮಾಣ ಪತ್ರ ಬಂದಿದೆ.