ಅಂಗಡಿ ಮಾಲೀಕನೊಬ್ಬ ಬೆಳಗ್ಗೆ ತನ್ನ ಅಂಗಡಿಯನ್ನು ತೆರೆದಾಗ ನಿಜಕ್ಕೂ ಶಾಕ್ ಗೆ ಒಳಗಾಗಿದ್ದಾನೆ.ಮೊಬೈಲ್ ಅಂಗಡಿಯಲ್ಲಿ ಕಳ್ಳರ ಕೈಚಳಕ ನಡೆದಿದೆ. ಅಂಗಡಿ ಮೇಲ್ಭಾಗದ ಶೀಟ್ ಕಟ್ ಮಾಡಿ ಕಳ್ಳತನ ಮಾಡಿರುವ ಖದೀಮರು ಅಪಾರ ಮೌಲ್ಯದ ವಸ್ತುಗಳನ್ನು ಕದ್ದು ಒಯ್ದಿದ್ದಾರೆ.ಬೆಂಗಳೂರು ಹೊರವಲಯ ಆನೇಕಲ್ ಪಟ್ಟಣದ ಅತ್ತಿಬೆಲೆ ರಸ್ತೆಯಲ್ಲಿ ಘಟನೆ ನಡೆದಿದೆ. ಅತ್ತಿಬೆಲೆ ರಸ್ತೆಯಲ್ಲಿರುವ ಅಂಜನಾದ್ರಿ ಮೊಬೈಲ್ ಅಂಗಡಿಯಲ್ಲಿ ಕಳ್ಳರು ಕೈಚಳಕ ತೋರಿ ಪರಾರಿಯಾಗಿದ್ದಾರೆ. ರಾತ್ರಿ ನಡೆದಿರುವ ಘಟನೆ ಇದಾಗಿದೆ. ಸುಮಾರು ಇಪ್ಪತ್ತು ಸಾವಿರ