ಬೆಂಗಳೂರು : ಪತ್ನಿಯ ಅನೈತಿಕ ಸಂಬಂಧಕ್ಕೆ ಬೇಸತ್ತಿದ್ದ ವ್ಯಕ್ತಿಯೋರ್ವ ಪತ್ನಿ ಹಾಗೂ ಅತ್ತೆಯನ್ನು ಕೊಂದಿರುವ ಘಟನೆ ಗೋವಿಂದರಾಜ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೃತ ದುರ್ದೈವಿಯನ್ನು ಸಾವಿತ್ರಿ ಹಾಗೂ ಸರೋಜಮ್ಮ ಎಂದು ಗುರುತಿಸಲಾಗಿದ್ದು, ರವಿಕುಮಾರ್ ಕೊಲೆ ಮಾಡಿದ ಆರೋಪಿಯಾಗಿದ್ದಾನೆ.ಹೆಂಡತಿಯ ಅನೈತಿಕ ಸಂಬಂಧಕ್ಕೆ ಬೇಸತ್ತಿದ್ದ ರವಿಕುಮಾರ್, ಪದೇ ಪದೇ ಹೆಂಡತಿಗೆ ಬುದ್ಧಿವಾದ ಹೇಳಿದ್ದನು. ಆದರೂ ಹೆಂಡತಿ ತನ್ನ ಛಾಳಿಯನ್ನು ತಿದ್ದುಕೊಳ್ಳದ ಹಿನ್ನೆಲೆ ಮೊದಲು ವಾಸ ಮಾಡುತ್ತಿದ್ದ ಮನೆಯನ್ನು ಖಾಲಿ