ಶಾಕಿಂಗ್! ಪುಳಿಯೋಗರೆ ಪ್ಯಾಕೆಟ್ ನಲ್ಲಿ ಏನಿತ್ತು ಗೊತ್ತಾ?

ಚಿತ್ರದುರ್ಗ, ಗುರುವಾರ, 14 ಫೆಬ್ರವರಿ 2019 (15:18 IST)

ತಮ್ಮ ಮಗನಿಗೆ ಉಪಹಾರ ಸಿದ್ಧಪಡಿಸುತ್ತಿದ್ದಾಗ ಪುಳಿಯೋಗರೆ ಪ್ಯಾಕೇಟ್ ನಲ್ಲಿದ್ದದ್ದನ್ನು ನೋಡಿ ವ್ಯಕ್ತಿಯೊಬ್ಬರು ಹೌಹಾರಿದ ಘಟನೆ ನಡೆದಿದೆ.

ಪುಳಿಯೋಗರೆ ಪ್ಯಾಕೇಟ್ ನಲ್ಲಿ ಹಲ್ಲಿ ಪತ್ತೆಯಾದ ಘಟನೆ ನಡೆದಿದೆ. ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ತೊಡರನಾಳ್ ಗ್ರಾಮದಲ್ಲಿ ಘಟನೆ ನಡೆದಿದ್ದು, ಎಂಟಿಆರ್ ಕಂಪನಿಯ ಪುಳಿಯೊಗರೆ ಪ್ಯಾಕೇಟ್ ನಲ್ಲಿ ಹಲ್ಲಿ ಪತ್ತೆಯಾಗಿದೆ.

ಪುಳಿಯೋಗರೆ ಸೇವಿಸಿ ಕೆಲಸಕ್ಕೆ ಹೋದಾಗ ಪ್ರಭು ಎಂಬುವರು ಅಸ್ವಸ್ಥರಾಗಿದ್ದಾರೆ. ಪುಳಿಯೋಗರೆಯ ಪ್ಯಾಕೇಟ್ ನಲ್ಲಿ ಅರ್ಧ ಭಾಗ ಮಾತ್ರ ಬಳಕೆ ಮಾಡಿದ್ದರು. ಪ್ರಭು ಅವರ ಪುತ್ರ ಪ್ರಜ್ವಲ್ ಗೆ ಉಪಹಾರ  ಸಿದ್ಧಪಡಿಸುವಾಗ ಅದರಲ್ಲಿ ಹಲ್ಲಿ  ಪತ್ತೆಯಾಗಿದೆ.

ಅಸ್ವಸ್ಥರಾದ ಪ್ರಭುಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಸ್ಥಳಕ್ಕೆ ಧಾವಿಸದ ಆರೋಗ್ಯಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕಿರುವ ಪ್ರಭು, ಕಂಪನಿ ವಿರುದ್ಧ ಕಾನೂನು ಹೋರಾಟ ಮಾಡುವುದಾಗಿ ಹೇಳಿದ್ದಾರೆ.


 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಲಂಚ ಪಡೆಯುತ್ತಿದ್ದ ಅಧಿಕಾರಿ ರೆಡ್ ಹ್ಯಾಂಡ್ ಸಿಕ್ಕಿಬಿದ್ದ!

ಲಂಚ ಪಡೆಯುತ್ತಿದ್ದ ಅಧಿಕಾರಿಯೊಬ್ಬರು ಎಸಿಬಿ ಬಲೆಗೆ ಬಿದ್ದಿದ್ದಾರೆ.

news

ಜೆಡಿಎಸ್ ಕಾರ್ಯಕರ್ತರ ವಿರುದ್ಧ ಬಿಸಿಲೂರಿನಲ್ಲಿ ಬೀದಿಗಿಳಿದ ಬಿಜೆಪಿ

ಹಾಸನ ಬಿಜೆಪಿ ಶಾಸಕ ಪ್ರೀತಂ ಗೌಡ ಮನೆ ಮೇಲೆ ಕಲ್ಲು ತೂರಾಟ ಪ್ರಕರಣ ಖಂಡಿಸಿ ಬಿಸಿಲೂರಿನಲ್ಲಿ ಬಿಜೆಪಿ ...

news

ಇಂದು ಸಿಂಧನೂರಿಗೆ ಅಮಿತ್ ಶಾ ಆಗಮನ

ಬಿಸಿಲನಾಡು ರಾಯಚೂರು ಜಿಲ್ಲೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಇಂದು ಭೇಟಿ ನೀಡಲಿದ್ದಾರೆ.

news

ಶಾಸಕ ಪ್ರೀತಂಗೌಡಗೆ ರಕ್ಷಣೆ ನೀಡಬೇಕೆಂದವರಾರು?

ಹಾಸನ ಬಿಜೆಪಿ ಶಾಸಕ ಪ್ರೀತಮ್ ಗೌಡ ಮನೆ ಮೇಲೆ ಕಲ್ಲು ತೂರಾಟ ದಿನದಿನಕ್ಕೆ ಹೊಸ ತಿರುವು ...