ಮುಂಬೈ: ಎಐಎಂಐಎಂ ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರು ದಕ್ಷಿಣ ಮುಂಬೈನ ನಾಗಪಾಡದಲ್ಲಿ ನಡೆದ ರಾಲಿಯೊಂದನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ ಅವರ ಮೇಲೆ ಅಪರಿಚಿತರೊಬ್ಬರು ಬೂಟು ಎಸೆದಿದ್ದಾರೆ. ಈ ಘಟನೆಯು ನಿನ್ನೆ (ಮಂಗಳವಾರ) ರಾತ್ರಿ ವೇಳೆಯಲ್ಲಿ ಸಂಭವಿಸಿತು ಬೂಟು ಎಸೆತದಿಂದ ಓವೈಸಿಗೆ ಗಾಯಗಳೇನು ಆಗಲಿಲ್ಲ. ಆದರೆ ಬೂಟು ಎಸೆಯುವವರು ಗಾಂಧಿ ಹಂತಕರ ಹಿಂಬಾಲಕರು ಎಂದು ಓವೈಸಿ ಅದೇ ಕೂಡಲೇ ಪ್ರತಿಕ್ರಿಯೆ ನೀಡಿದರು. ಈ ಘಟನೆಯಿಂದ ವಿಚಲಿತರಾಗದ ಓವೈಸಿ, ನನ್ನ ಪ್ರಜಾಸತ್ತಾತ್ಮಕ ಹಕ್ಕುಗಳಿಗಾಗಿ ನಾನು