ಒಂಟಿಯಾಗಿ ತಿರುಗಾಡುತ್ತಿದ್ದ ಮಹಿಳೆಯರು ಹಾಗೂ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ಪಂಚ್ ನಿಂದ ಮುಖಕ್ಕೆ ಗುದ್ದಿ ಅವರ ಬಳಿ ಇದ್ದ ಚಿನ್ನಾಭರಣ, ಹಣ ಸುಲಿಯುತ್ತಿದ್ದ ಖದೀಮನಿಗೆ ಕೊನೆಗೂ ಗುಂಡೇಟು ಬಿದ್ದಿದೆ. ಬಿಸಿಲೂರು ಖ್ಯಾತಿಯ ಕಲಬುರಗಿ ನಗರದಲ್ಲಿ ಮತ್ತೆ ಗುಂಡಿನ ಸದ್ದು ಕೇಳಿಬಂದಿದೆ. ಒಬ್ಬಂಟಿಯಾಗಿ ಓಡಾಡುತ್ತಿದ್ದವರನ್ನು ಗುರಿಯಾಸಿಕೊಂಡು ಅವರ ಮುಖಕ್ಕೆ ಪಂಚ್ ಮಾಡಿ ಚಿನ್ನ, ಹಣ, ಮೊಬೈಲ್ ಸೇರಿದಂತೆ ಬೆಲೆ ಬಾಳುವ ವಸ್ತುಗಳನ್ನು ದೋಚಿಕೊಂಡು ಹೋಗುತ್ತಿದ್ದ ಕುಖ್ಯಾತ ದರೋಡೆಕೋರರನ ಮೇಲೆ ಪೊಲೀಸರು ಗುಂಡು ಹಾರಿಸಿ,