ಅಂಗಡಿಯೊಂದರ ಮಾಲೀಕನೊಬ್ಬ ತನ್ನ ಅಂಗಡಿಯಲ್ಲಿ ಹಮಾಲಿ ಮಾಡಿಕೊಂಡಿದ್ದ ವ್ಯಕ್ತಿಯನ್ನು ಕೊಲೆಮಾಡಿದ್ದಾನೆ.ಕೃತ್ಯ ಖಂಡಿಸಿ ಹಮಾಲರಿಂದ ಪ್ರತಿಭಟನೆ ನಡೆದಿದ್ದು, ದಾವಣಗೆರೆ ಈರುಳ್ಳಿ ಮಾರುಕಟ್ಟೆ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದಾರೆ. ಅಷ್ಟೇ ಅಲ್ಲ, ಮಾಲೀಕನ ಅಂಗಡಿ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಅಂಗಡಿ ಗಾಜು ಹಾಗೂ ಉಪಕರಣಗಳು ಧ್ವಂಸಗೊಂಡಿವೆ.ಹಮಾಲಿ ಬಸಾಪುರ ವೀರೇಶ (35) ಎಂಬಾತ ಕೊಲೆಗೀಡಾದವನು.ಏ. 26ರಂದು ರಂದು ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಹಲಗೇರಿ ಬಳಿ ನಡೆದ ಕೊಲೆ ಪ್ರಕರಣದ ಪೊಲೀಸ್ ತನಿಖೆಯಿಂದ