‘ನನ್ಮಕ್ಳು ಜೆಡಿಎಸ್‍ ನವರನ್ನು ಹೆದರಿಸಬೇಕು,ಅವರು ಕೌರವ ವಂಶಸ್ಥರು- ಮಾಜಿ ಶಾಸಕ ಸುರೇಶ್ ಗೌಡ

ತುಮಕೂರು, ಶುಕ್ರವಾರ, 29 ಮಾರ್ಚ್ 2019 (15:17 IST)

ತುಮಕೂರು : ಒಂದೊಂದು ವೋಟು ಕೂಡ ಇಂಪಾರ್ಟೆಂಟ್ ಕಣ್ರೋ. ಯಾವುದಕ್ಕೂ ಎದೆಗುಂದದೆ ದೊಣ್ಣೆ ಹಿಡಿದು ನಿಂತುಕೊಳ್ಳಿ. ಯಾವನ್ ಬರ್ತಾನೋ ಬರಲಿ, ಎಂದು ತುಮಕೂರಿನಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾಜಿ ಶಾಸಕ ಜೆಡಿಎಸ್ ವಿರುದ್ಧ  ವಾಗ್ದಾಳಿ ನಡೆಸಿದ್ದಾರೆ.


‘ನನ್ಮಕ್ಳು ಜೆಡಿಎಸ್‍ ನವರನ್ನು ಹೆದರಿಸಬೇಕು. ಅವರು ಮೋಸ ಮಾಡ್ತಾರೆ. ಅವರು ಕೌರವ ವಂಶಸ್ಥರು. ಅವರ ಮೇಲೆ ಯುದ್ಧ ಮಾಡಬೇಕಾದರೆ ಕೃಷ್ಣನಂತೆ ನಾನು ಇರುತ್ತೀನಿ. ನಿಂತ್ಕೊಂಡು ಯುದ್ಧ ಮಾಡಿ ಅವರನ್ನು ಸಂಹಾರ ಮಾಡೋಣ. ಅವರ ಟೆಕ್ನಿಕ್ಸ್ ನಂಗೆ ಗೊತ್ತಿದೆ ಎಂದು ಹೇಳಿದ್ದಾರೆ.


ಹಾಗೇ ಗೌರಿಶಂಕರ್ ನಮ್ ದುಡ್ಡೇ ಹೊಡೀತಾನೆ. ನಮ್ ದುಡ್ಡೇ ಹಂಚ್ತಾನೆ. ಅವನೇನು ಕೋಟ್ಯದೀಶ್ವರ ಅಲ್ಲ. ಅಪ್ಪ ಪೊಲೀಸ್ ಆಗಿದ್ದವನು. ಅವನೊಬ್ಬ ದೊಡ್ಡ ಕಳ್ಳ. ಗಣಿ ಧಣಿಯ 150 ಕೇಸಲ್ಲಿ ಲೂಟಿ ಹೊಡೆದಿದ್ದಾನೆ. ಇಂತಹ ಕಳ್ಳರನ್ನು ದೇವೇಗೌಡರು ಕರೆದುಕೊಂಡು ಬಂದು ನಾಟಿ ಮಾಡುತ್ತಾರೆ. ಚೆನ್ನಾಗಿ ಇಸ್ಕೊಳ್ಳಿ. ಚೆನ್ನಾಗಿ ತಿನ್ನಿ. ಎಲ್ಲಾ ಇಸ್ಕೊಂಡು ಬಿಜೆಪಿಗೆ ವೋಟು ಹಾಕಿ. ದುಡ್ಡು ಬಂದರೆ ಚೆನ್ನಾಗ್ ಇಸ್ಕೊಂಡು ತಿನ್ರಲೇ. ಅವನು ಕ್ಯಾನ್ವಸ್ ಗೆ ಬಂದರೆ ಊರಿನ ಒಳಗಡೆ ಬಿಡಬೇಡಿ. ನೀರ್ ಬಿಡಿಸ್ದಲೇ ಇರೋ ಕಳ್ಳ ಕಳ್ಳ ಎಂದು ಕೂಗಿ ಎಂದು ಶಾಸಕ ಗೌರಿಶಂಕರ್ ವಿರುದ್ಧ ಕಿಡಿಕಾರಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
           ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಪಕ್ಕದ್ಮನೆ ಪರಿಮಳಾ ತಡರಾತ್ರಿ ಬಾ ಅಂತಾಳೆ… ಏನ್ಮಾಡಲಿ?

ಅವರ ಗಂಡ ಬೆಳಗ್ಗೆ ಮನೆ ಬಿಟ್ಟು ಬೇರೆ ಊರಿಗೆ ನಿತ್ಯ ಕೆಲಸಕ್ಕೆ ಹೋಗಿ ರಾತ್ರಿ ಮನೆಗೆ ಬರುತ್ತಾರೆ. ...

news

ದೊಣ್ಣೆ ಹಿಡ್ಕಂಡು ನಿಂತ್ಕಳಿ ಎಂದ ಮಾಜಿ ಶಾಸಕ…

ದೊಣ್ಣೆ ಹಿಡ್ಕಂಡು ನಿಂತ್ಕಳಿ ಎಂದು ಶಾಸಕರೊಬ್ಬರು ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

news

ಅಂಬರೀಶ್ ಗೆ ಪುನರ್ಜನ್ಮ ಕೊಟ್ಟಿದ್ದೇ ನಾನು ಎಂದ ಸಚಿವ

ಮಂಡ್ಯದಲ್ಲಿ ಚುನಾವಣೆ ಕಾವು ಜೋರಾಗಿರುವಂತೆ ಮುಖಂಡರ ಹೇಳಿಕೆಗಳೂ ಗದ್ದಲ ಮಾಡುತ್ತಿವೆ.

news

ಐಟಿ ದಾಳಿ ವಿಷ್ಯಕ್ಕೆ ಹೊರಟ್ಟಿ ಹೀಗ್ಯಾಕೆ ಹೇಳಿದ್ರು?

ಸಿಎಂ ಆಪ್ತರ ಮೇಲೆ ಐಟಿ ದಾಳಿ ವಿಚಾರಕ್ಕೆ ಸಂಬಂಧಿಸಿದಂತೆ ಎಂಎಲ್ ಸಿ ಬಸವರಾಜ ಹೊರಟ್ಟಿ ಹೇಳಿಕೆ