ಅನಾರೋಗ್ಯದ ಹಿನ್ನಲೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುವ ಪದ್ಮಶ್ರೀ ಸಾಲುಮರದ ತಿಮ್ಮಕ್ಕ ಅವರನ್ನು ಜಿಲ್ಲಾಧಿಕಾರಿ ಭೇಟಿ ಮಾಡಿದ್ದಾರೆ. ಹಾಸನ ನಗರದ ಮಣಿಸೂಪರ್ ಸ್ಪೇಷಲಿಟಿಸ್ ಆಸ್ಪತ್ರೆಯಲ್ಲಿ ಪದ್ಮಶ್ರೀ ಸಾಲುಮರದ ತಿಮ್ಮಕ್ಕ ಚಿಕಿತ್ಸೆಗೆ ದಾಖಲಾಗಿದ್ದಾರೆ. ವಯೋ ಸಹಜ ಕಾಯಿಲೆಯಿಂದ ಬಳಲುತ್ತಿರುವ ಸಾಲು ಮರದ ತಿಮ್ಮಕ್ಕ ಅವರು ಬೇಗ ಗುಣಮುಖರಾಗಲಿ ಎಂದು ಹಾಸನ ಜಿಲ್ಲಾಧಿಕಾರಿ ಆರ್.ಗಿರೀಶ್ ಹಾರೈಸಿದರು.ಸಮಾಜಕ್ಕೆ ವೃಕ್ಷಮಾತೆಯ ಕೊಡುಗೆ ಅಪಾರವಾಗಿದೆ. ಇವರ ಆರೋಗ್ಯ ಸೇವೆಗೆ ಜಿಲ್ಲಾಡಳಿತ ಸಿದ್ಧವಿರುತ್ತದೆ ಎಂದು ಜಿಲ್ಲಾಧಿಕಾರಿ ಹೇಳಿದರು.ಸಾಲುಮರದ ತಿಮ್ಮಕ್ಕ ಅವರ ಅರೋಗ್ಯ