ಬಾಗಲಕೋಟೆ: ಸಿದ್ದಗಂಗಾ ಶ್ರೀಗಳು `ಭಾರತರತ್ನಕ್ಕಾಗಿ ಮಾತು ಬದಲಿಸಬಾರದು ಎಂದು ಶ್ರೀಗಳ ವಿರುದ್ಧ ಬಸವಧರ್ಮ ಪೀಠಾಧ್ಯಕ್ಷೆ ಮಾತೆ ಮಹಾದೇವಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಬಾಗಲಕೋಟೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿದ್ದಗಂಗಾ ಶ್ರೀಗಳಿಗೆ ವಯಸ್ಸಾಗಿದೆ. ಅವರಿಗೆ ನೆನಪಿನ ಶಕ್ತಿ ಉಳಿದಿಲ್ಲ. ಬೇಲಿಮಠದ ಶ್ರೀಗಳನ್ನು ನೀವು ಯಾರು ಎಂದು ಕೇಳಿದ್ದರು. ಇದನ್ನೇ ಬಿ.ಎಸ್.ಯಡಿಯೂರಪ್ಪ, ವಿ.ಸೋಮಣ್ಣ ಸೇರಿದಂತೆ ಮತ್ತಿತರರು ಇದನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಎಂ.ಬಿ.ಪಾಟೀಲರ ಬಳಿ ಸ್ವತಂತ್ರ ಧರ್ಮದ ಬಗ್ಗೆ ಹೇಳಿದ್ದಾರೆ. ಇದಾದ ನಂತರ