ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಹಿಂದ ಮಂತ್ರ ಕೇವಲ ರಾಜಕಾರಕ್ಕಷ್ಟೇ ಸಿಮಿತವಾಯ್ತಾ ? ಎಲ್ಲಾ ಅಹಿಂದ ವರ್ಗಗಳನ್ನ ಒಗ್ಗೂಡಿಸಲು ಹೊರಟ ಸಿದ್ದರಾಮಯ್ಯ ನವರ ಕನಸು ಹುಸಿಯಾದಂತೆ ಕಾಣುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತಿದೆ ಈ ಘಟನೆ.ದೇವಸ್ಥಾನದಲ್ಲಿ ನಡೆಯುತ್ತಿದ್ದ ಅನ್ಯಾಯ ಅಕ್ರಮಗಳ ವಿಚಾರವಾಗಿ ಧ್ವನಿಯೆತ್ತಿದ ದಲಿತರ ಮೇಲೆ ಕುರುಬ ಸಮುದಾಯದಿಂದ ಇನ್ನಿಲ್ಲದ ಶೋಷಣೆ ನಡೆಯುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ತುಮಕೂರು ಜಿಲ್ಲೆ ತಿಪಟೂರು ತಾಲ್ಲೂಕಿನ ಗಂಗನಘಟ್ಟ ಮೇಲನಹಳ್ಳಿಯಲ್ಲಿ ಈ ಘಟನೆ ನಡೆದಿದೆ. 90