ಬೆಂಗಳೂರು : ಸಚಿವ ಸುಧಾಕರ್ ಏಕಪತ್ನಿವ್ರತಸ್ಥ ಹೇಳಿಕೆ ವಿವಾದ ಮಾಜಿ ಸಿಎಂ ಸಿದ್ಧರಾಮಯ್ಯ ಬಿಜೆಪಿಯವರಿಗೆ ಹೊಸ ಸವಾಲು ಹಾಕಿದ್ದಾರೆ. ಯಾವ ಶಾಸಕರೂ ಏಕಪತ್ನಿವ್ರತಸ್ಥರಲ್ಲ. ಸುಧಾಕರ್ ಹೇಳಿಕೆ ಬಿಜೆಪಿ ಶಾಸಕರಿಗೂ ಅನ್ವಯವಾಗುತ್ತೆ. ಸ್ವೀಕರ್ ಕಾಗೇರಿ , ಸಿಎಂ ಬಿಎಸ್ ವೈ ಸೇರಿ ಎಲ್ಲರಿಗೂ ಅನ್ವಯವಾಗುತ್ತೆ. ಹಾಗಾಗಿ ತಮ್ಮ ವೈವಾಹಿಕ ಸಂಬಂಧವನ್ನು ಸ್ಪಷ್ಟಪಡಿಸಬೇಕು ಎಂದು ಟ್ವೀಟರ್ ನಲ್ಲಿ ಮಾಜಿ ಸಿಎಂ ಸಿದ್ಧರಾಮಯ್ಯ ಸವಾಲು ಹಾಕಿದ್ದಾರೆ.ಅಲ್ಲದೆ ಸುಧಾಕರ್ ವಿರುದ್ಧ ಕಾನೂನು ಕ್ರಮಕ್ಕೆ ಬಿಗಿಪಟ್ಟು ಹಿಡಿದಿದ್ದಾರೆ.