ಕೆಣಕಿದ ಸಂಸದ ರಾಜೀವ್ ಚಂದ್ರಶೇಖರ್ ಗೆ ಮಾಜಿ ಸಿಎಂ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ತಿವಿದಿದ್ದಾರೆ.ಟ್ವೀಟ್ ನಲ್ಲಿ ಸಿದ್ದರಾಮಯ್ಯರನ್ನು ಕೆಣಕಿದ್ದರು ಬಿಜೆಪಿ ಸಂಸದ ರಾಜೀವ್ ಚಂದ್ರಶೇಖರ್. ಟಿಪ್ಪು ಸುಲ್ತಾನ್ ಕುರಿತಾಗಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹಾಕಿದ್ದ ಸ್ಟೇಟಸ್ ಮುಂದಿಟ್ಟುಕೊಂಡು ಸಿದ್ದರಾಮಯ್ಯರನ್ನು ಕೆಣಕಿದ್ದರು ರಾಜೀವ್ ಚಂದ್ರಶೇಖರ್.ಡಿಯರ್ ಸಿದ್ದರಾಮಯ್ಯನವರೇ ನೀವು ಇದೀಗ ಇಮ್ರಾನ್ ಖಾನ್ ಅಪ್ಪಿಕೊಳ್ಳೋ ಸಮಯ. ಇದು ರಾಹುಲ್ ಗಾಂಧಿಗೆ ಹತ್ತಿರವಾಗಲು ಸುಲಭದ ದಾರಿ ಎಂದು ಟ್ವೀಟ್ ಮಾಡಿದ್ದರು.