ಬೆಂಗಳೂರು : ನಿರೀಕ್ಷೆಯಂತೆ ಸದನದಲ್ಲಿ ಪಿಎಸ್ಐ ನೇಮಕಾತಿ ಹಗರಣ ಪ್ರತಿಧ್ವನಿಸಿದೆ.ವಿಷಯ ಪ್ರಸ್ತಾಪಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರದ ಮೇಲೆ ಮುಗಿಬಿದ್ರು. ಪ್ರಕರಣದಲ್ಲಿ ಪಾಲ್ಗೊಂಡಿರೋ ರಾಜಕಾರಣಿಗಳ ಬಂಧನಕ್ಕೆ ಒತ್ತಾಯಿಸಿದ್ರು.ಹಾಲಿ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆಗೆ ಒತ್ತಾಯಿಸಿದರು. ಆಡಳಿತ ಮತ್ತು ವಿಪಕ್ಷಗಳ ಮಧ್ಯೆ ಜೋರು ವಾಗ್ಯುದ್ಧ ನಡೆಯಿತು. ಸದನದ ಬಾವಿಗಿಳಿದು ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸಿದ್ರು.ಉದ್ಯೋಗಾಂಕ್ಷಿಗಳು ನೀಡಿದ್ದ ಅಕ್ಕಿ, ಬೇಳೆಯ ಗಂಟನ್ನು ಸಿದ್ದರಾಮಯ್ಯ ತೋರಿಸಿದ್ದಕ್ಕೆ ಇದೆಲ್ಲಾ ಇವೆಂಟ್ ಮ್ಯಾನೇಜ್ಮೆಂಟ್ ಎಂದು ಸಿಎಂ ತಿರುಗೇಟು ನೀಡಿದರು.