ತುಮಕೂರು : ಸಿದ್ದರಾಮಯ್ಯ ರನ್ನು ಪರಮೋಚ್ಚ ನಾಯಕರು ಎನ್ನುತ್ತಾರೆ . ಅವರಿಗೆ ಮಾನ ಮರ್ಯಾದೆ ಇದ್ಯಾ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ವಾಗ್ದಾಳಿ ನಡೆಸಿದ್ದಾರೆ. ಮಾಜಿ ಸಿಎಂ ಆಗಿ ಸ್ಪೀಕರ್ ಗೌರವಿಸಬೇಕೇಂಬ ಜ್ಞಾನವಿಲ್ಲ. ಸ್ಪೀಕರ್ ವಿರುದ್ಧ ಅವರು ಏಕವಚನದಲ್ಲಿ ಮಾತನಾಡ್ತಾರೆ. ಜಗತ್ತೇ ಮೆಚ್ಚಿಕೊಂಡಿರುವ ಮೋದಿ ನರಹಂತಕ ಎನ್ನುತ್ತಾರೆ. ಇದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನವರ ಸಂಸ್ಕೃತಿ. ನನ್ನದು ಹಿಂದೂ ರಕ್ತ. ಹಿಂದೂಗಳಿಗೆ ಅಗೌರವ ತೋರಿದರೆ ನನ್ನ ರಕ್ತ ಕುದಿಯುತ್ತದೆ.