ಒಬ್ಬ ಮುಖ್ಯಮಂತ್ರಿಯಾಗಿ 35 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಸೋತು ಸುಣ್ಣವಾಗಿರೋ ಸಿದ್ಧರಾಮಯ್ಯ ತಾನು ಮತ್ತೆ ಮುಖ್ಯಮಂತ್ರಿ ಆಗ್ತೇನೆ ಎಂದು ಹಗಲುಗನಸು ಕಾಣ್ತಿದ್ದಾರೆ. ಹೀಗಂತ ಕೇಂದ್ರದ ಮಾಜಿ ಸಚಿವ ಹಾಗೂ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ವ್ಯಂಗ್ಯವಾಡಿದ್ದಾರೆ.ಪರಸ್ಪರ ಹಾವು -ಮುಂಗುಸಿಗಳಂತೆ ಕಿತ್ತಾಡುತ್ತಿದ್ದ ಜೆಡಿಎಸ್- ಕಾಂಗ್ರೆಸ್ ಪಕ್ಷಗಳು ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಅಪವಿತ್ರ ಮೈತ್ರಿ ಮಾಡಿಕೊಂಡಿದ್ದವು. ಆ ಬಳಿಕ ಪರಸ್ಪರ ದೋಷಾರೋಪಣೆ ಮಾಡಿಕೊಂಡು ಕಿತ್ತಾಡಿಕೊಂಡು ಸರ್ಕಾರ ಪಥನವಾಗಿದ್ದನ್ನು ಕಂಡಿದ್ದೇನೆ. ಸಿದ್ದರಾಮಯ್ಯ ಒಬ್ಬ ದುರಹಂಕಾರಿ ರಾಜಕಾರಣಿಯಾಗಿದ್ದಾರೆ.