ಕುಮಾರಸ್ವಾಮಿಗೆ ಸಿಎಂ ಆಗಿ ಕೆಲಸ ಮಾಡಲು ಸಿದ್ಧರಾಮಯ್ಯ ಬಿಡುತ್ತಿಲ್ಲ-ಸದಾನಂದಗೌಡರ ಆರೋಪ

ಮಂಗಳೂರು| pavithra| Last Modified ಶನಿವಾರ, 19 ಜನವರಿ 2019 (11:43 IST)
ಮಂಗಳೂರು : ಸಿಎಂಗೆ ಸಿದ್ಧರಾಮಯ್ಯನವರೇ ಅಡ್ಡಿ ಎಂದು ಮಂಗಳೂರಿನಲ್ಲಿ ಇಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡರು ಮಾಜಿ ಸಿಎಂ ಸಿದ್ದರಾಮಯ್ಯನವರ ವಿರುದ್ಧ ಆರೋಪ ಮಾಡಿದ್ದಾರೆ.

ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ‘ಕುಮಾರಸ್ವಾಮಿ ಸಿಎಂ ಆಗಿ ಕೆಲಸ ಮಾಡಲು ಆಗುತ್ತಿಲ್ಲ. ಕುಮಾರಸ್ವಾಮಿಗೆ ಕೆಲಸ ಮಾಡಲು ಬಿಡುತ್ತಿಲ್ಲ. ಈ ಎಲ್ಲಾ ನಾಟಕದ ಹಿಂದೆ ಸಿದ್ಧರಾಮಯ್ಯರ ಪೂರ್ತಿ ಕೈವಾಡವಿದೆ’ ಎಂದು ಅವರು ಆರೋಪಿಸಿದ್ದಾರೆ.


‘ಸಿದ್ಧರಾಮಯ್ಯ ನವರೇ ತನ್ನ ಹಿಂಬಾಲಕರನ್ನ ಬಿಟ್ಟು ಅಸ್ಥಿರಕ್ಕೆ ಯತ್ನಿಸುತ್ತಿದ್ದಾರೆ. ಒಂದು ಕಡೆಯಿಂದ ಸಮಾಧಾನ ಮಾಡುವ ನಾಟಕವಾಡಿ, ಮತ್ತೊಂದೆಡೆ ಒಳಗಿಂದೊಳಗೆ ಬೆಂಕಿ ಹಚ್ಚುವ ಕೆಲಸ ಮಾಡ್ತಿದ್ದಾರೆ’ ಎಂದು ಅವರು ಮಾಜಿ ಸಿಎಂ ಸಿದ್ದರಾಮಯ್ಯನವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ


ಇದರಲ್ಲಿ ಇನ್ನಷ್ಟು ಓದಿ :