ಮೈತ್ರಿ ಸರಕಾರ ಪತನಗೊಂಡ ತಿಂಗಳೊಳಗೆ ಉಭಯ ಪಕ್ಷಗಳಲ್ಲಿ ಬಿರುಕು ಮೂಡಿ ದೋಸ್ತಿ ಖತಂ ಆಗಿದೆ. ಈ ನಡುವೆ ಮಾಜಿ ಸಿಎಂ ಇಬ್ಬರ ನಡುವೆ ವಾಕ್ಸಮರ ಮುಂದುವರಿದಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿಗೆ ಖಡಕ್ ತಿರುಗೇಟು ನೀಡಿದ್ದಾರೆ. ಮೈತ್ರಿ ಆಡಳಿತ ಅವಧಿಯಲ್ಲಿ ಎಫ್ ಡಿ ಎ (ಕ್ಲರ್ಕ್) ಥರ ನನ್ನನ್ನ ನಡೆಸಿಕೊಂಡಿದ್ದರು ಎಂದಿರೋ ಕುಮಾರಸ್ವಾಮಿ ಹೇಳಿಕೆಗೆ ಸಿದ್ದರಾಮಯ್ಯ ಭರ್ಜರಿಯಾಗಿಯೇ ಟಾಂಗ್ ನೀಡಿದ್ದಾರೆ. ನಾನು ಸಮನ್ವಯ ಸಮಿತಿ ಅಧ್ಯಕ್ಷನಾಗಿದ್ದೆ. ಆದರೆ