ನಾನು ಸಿದ್ದು ಕಾಂಗ್ರೆಸ್ ನಲ್ಲಿಲ್ಲ, ಇಂಡಿಯನ್ ಕಾಂಗ್ರೆಸ್ ನಲ್ಲಿದ್ದೇನೆ. ಹೀಗಂತ ರೋಷನ್ ಬೇಗ್ ನೀಡಿರೋ ಹೇಳಿಕೆಗೆ ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ.ರಾಹುಲ್ ಗಾಂಧಿ ಭೇಟಿ ಬಳಿಕ ಸಿದ್ದರಾಮಯ್ಯ ಮಾತನಾಡಿದ್ದು, ನಾವೆಲ್ಲರೂ ಇಂಡಿಯನ್ ಕಾಂಗ್ರೆಸ್ ನಲ್ಲಿ ಇದ್ದೇವೆ. ರೋಷನ್ ಬೇಗ್ ಎಲ್ಲಿದ್ದಾರೋ ಗೊತ್ತಿಲ್ಲ. ರೋಷನ್ ಬೇಗ್ ರನ್ನ ಸಸ್ಪೆಂಡ್ ಮಾಡಿರುವುದು ಕಾಂಗ್ರೆಸ್ ಪಕ್ಷ. ನಾನು ಅವರನ್ನು ಪಕ್ಷದಿಂದ ಸಸ್ಪೆಂಡ್ ಮಾಡಿಲ್ಲ ಎಂದರು.ಇನ್ನ ಹೆಚ್.ವಿಶ್ವನಾಥ್ ಹೇಳಿಕೆಗಳಿಗೆ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.ಜಿಂದಾಲ್ ಪ್ರಕರಣದ ಬಗ್ಗೆ ಸಿಎಂ