ಕಾವೇರಿ ಮೇಲೆ ಸಿದ್ದರಾಮಯ್ಯ ಕಣ್ಣು

ಬೆಂಗಳೂರು, ಶುಕ್ರವಾರ, 11 ಅಕ್ಟೋಬರ್ 2019 (17:54 IST)

ಮುಖ್ಯಮಂತ್ರಿಯಾದವರು ಕಾವೇರಿ ನಿವಾಸಕ್ಕೆ ಬರೋದು ವಾಡಿಕೆ. ಆದರೆ ಸಮ್ಮಿಶ್ರ ಸರಕಾರ ಪತನವಾಗಿ ಬಿಜೆಪಿ ಅಧಿಕಾರಕ್ಕೆ ಬಂದರೂ ಬಿಡೋಕೆ ಮುಂದಾಗ್ತಿಲ್ಲ.

ಮುಖ್ಯಮಂತ್ರಿ ಡಾಲರ್ಸ್ ಕಾಲೋನಿ ಮನೆಯಿಂದಲೇ ಕಾರ್ಯಚಟುವಟಿಕೆ ಮಾಡುತ್ತಿದ್ದಾರೆ. ಹೀಗಾಗಿ ಸಿಎಂ ಆದಾಗಿನಿಂದಲೂ ಕಾವೇರಿ ನಿವಾಸದಲ್ಲೇ ವಾಸ್ತವ್ಯ ಇರೋ ಸಿದ್ದರಾಮಯ್ಯ, ಕಾವೇರಿ ನಿವಾಸವನ್ನು ತಮಗೆ ಕೊಡಬೇಕು ಅಂತ ಮನವಿ ಮಾಡಿದ್ದಾರೆ.

ಮೈತ್ರಿ ಸರಕಾರದಲ್ಲಿ ಸಿದ್ದರಾಮಯ್ಯಗೆ ಯಾವುದೇ ಅಧಿಕಾರ ಇರಲಿಲ್ಲ. ಆಗಲೂ ಕಾವೇರಿಯಲ್ಲೇ ಇದ್ದರು. ಈಗ ವಿಪಕ್ಷ ನಾಯಕರಾಗಿರೋ ಕಾರಣ ಸಿದ್ದರಾಮಯ್ಯರಿಗೆ ಸರಕಾರವೇ ಮನೆ ಹಂಚಿಕೆ ಮಾಡಬೇಕು.

ಕಾವೇರಿ ನಿವಾಸದಲ್ಲೇ ಸಿದ್ದರಾಮಯ್ಯ ವಾಸ್ತವ್ಯ ಮುಂದುವರಿಯುತ್ತದೆಯೋ ಅಥವಾ ಬೇರೆ ಮನೆಯನ್ನು ಹಂಚಿಕೆ ಮಾಡಲಾಗುತ್ತದೆಯೋ ಅನ್ನೋದು ಶೀಘ್ರವೇ ಗೊತ್ತಾಗಲಿದೆ.

ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಅಧಿವೇಶನದಲ್ಲೇ ಮಾಜಿ – ಹಾಲಿ ಸ್ಪೀಕರ್ ನಡುವೆ ವಾಗ್ಯುದ್ಧ

ಪ್ರವಾಹ ಸಂತ್ರಸ್ಥರ ವಿಷಯವಾಗಿ ಮಾತನಾಡುತ್ತಿದ್ದ ಸಿದ್ದರಾಮಯ್ಯರ ಮಾತು ನಿಲ್ಲಿಸೋಕೆ ಮುಂದಾದ ಸ್ಪೀಕರ್ ...

news

ನೆರೆಗೆ ಹಾಳಾದ ಜಮೀನಲ್ಲೇ ಸೀಗೆ ಹುಣ್ಣಿಮೆ ಆಚರಣೆ: ಹಬ್ಬದ ದಿನ ಕಣ್ಣೀರು ಹಾಕಿದ ಅನ್ನದಾತ

ಪ್ರವಾಹದಿಂದ ಬೆಳೆ, ಬದುಕು ಕಳೆದುಕೊಂಡ ರೈತಾಪಿ ವರ್ಗ ಅಳಿದುಳಿದ ಜಮೀನಿನ ಬೆಳೆಯಲ್ಲೇ ಸೀಗೆ ಹುಣ್ಣಿಮೆ ...

news

ಕಿಸ್ ಮಾಡ್ತೀನಿ ಅಂತ ಪತ್ನಿಯ ನಾಲಿಗೆ ಕಟ್ ಮಾಡಿದ ಗಂಡ

ಗಂಡ – ಹೆಂಡತಿ ಜಗಳ ಉಂಡು ಮಲಗೋ ತನಕ ಅನ್ನೋದು ಹಳೇ ಗಾದೆ. ಈಗೀಗ ಕೆಲವು ದಂಪತಿಯ ಜಗಳ ಪೊಲೀಸ್ ಠಾಣೆ ...

news

ಈ ಬೀಜಕ್ಕಾಗಿ ಕುಟುಂಬದೊಂದಿಗೆ ಠಿಕಾಣಿ ಹೂಡಿರೋ ರೈತರು

ಕುಟುಂಬ ಸಹಿತವಾಗಿ ರೈತರು ಠಿಕಾಣಿ ಹೂಡಿರೋ ಘಟನೆ ನಡೆದಿದೆ.