ನಸುಕಿನ ವೇಳೆಯಲ್ಲೇ ಎಂಟಿಬಿ ನಾಗರಾಜ್ ಅವರ ಮನವೊಲಿಸಲು ಸಚಿವ ಡಿ.ಕೆ.ಶಿವಕುಮಾರ ಯತ್ನ ನಡೆಸಿದ್ರು. ಅದರ ಬೆನ್ನಲ್ಲೇ ನಡೆದ ಸಿದ್ದರಾಮಯ್ಯ-ಎಂಟಿಬಿ ಮಾತುಕತೆ ಮೈತ್ರಿ ಬಿಕ್ಕಟ್ಟಿಗೆ ತೇಪೆ ಹಾಕಲಿದೆಯಾ ಎನ್ನೋ ಕುತೂಹಲ ಮೂಡುತ್ತಿದ್ದಾದರೂ ಅದು ಅಷ್ಟಕ್ಕಷ್ಟೇ ಎಂಬಂತಾಗಿದೆಯಂತೆ.ರಾಜೀನಾಮೆ ನೀಡಿರೋ ಎಂಟಿಬಿ ನಾಗರಾಜ್ ರ ಮನವೊಲಿಸಲು ಮಾಜಿ ಸಿಎಂ ಸಿದ್ದರಾಮಯ್ಯ ವಿಫಲರಾಗಿದ್ದಾರೆ ಎನ್ನುವ ಮಾತುಗಳು ಕೇಳಿಬರಲಾರಂಭಿಸಿವೆ. ಸಿದ್ದರಾಮಯ್ಯ ನಿವಾಸಕ್ಕೆ ಎಂಟಿಬಿ ನಾಗರಾಜ್ ಭೇಟಿ ನೀಡಿದ್ರು.ಎರಡ್ಮೂರು ಗಂಟೆಗಳ ಸಮಯ ಚರ್ಚೆ ನಡೆಸಿದ್ರೂ ಯಾವುದೇ ಫಲಪ್ರದ ಅಂತ್ಯಕಾಣಲಿಲ್ಲ