ಜೈಲಿಂದ ಡಿಕೆ ಶಿವಕುಮಾರ್ ಬೇಗ ಹೊರ ಬಂದಿರೋದಕ್ಕೆ ಸಿದ್ದರಾಮಯ್ಯಗೆ ಸಮಾಧಾನವಿಲ್ಲ. ಹೀಗಂತ ಸಚಿವರೊಬ್ಬರು ಹೊಸ ಬಾಂಬ್ ಸಿಡಿಸಿದ್ದಾರೆ. ಚಿತ್ರದುರ್ಗದಲ್ಲಿ ಆರೋಗ್ಯ ಮಂತ್ರಿ ಶ್ರೀರಾಮುಲು ಹೇಳಿಕೆ ನೀಡಿದ್ದು, ಆಡಿಯೋ ಲೀಕ್ ವಿಚಾರ ರಾಜ್ಯದಲ್ಲಿ ಬಹಳಷ್ಟು ಚರ್ಚೆ ಆಗುತ್ತಿದೆ. ಮೂಲವಾಗಿ ಲೀಕ್ ಯಾರು ಮಾಡಿದ್ದಾರೆ ಎಂದು ಹೊರ ಬರಬೇಕಿದೆ. ಬಿಜೆಪಿಯಲ್ಲಿ ಯಡಿಯೂರಪ್ಪ ಅವರನ್ನ ಕೆಳಗಿಸಿ ಮುಂದೆ ಸಾಗುವವರು ಯಾರು ಇಲ್ಲ. ಆಡಿಯೋ, ವಿಡಿಯೋ ಕ್ಲೀಪ್ ನಕಲಿ ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದ್ರು.